ಶಿಕ್ಷಕರ ಕಾರ್ಯಭಾರದ ಒತ್ತಡ ಸಲ್ಲದು: ನಮೋಶಿ ಕಳವಳ
ಅದ್ಧೂರಿಯಾಗಿ ಜರುಗಿದ ಪ್ರಥಮ ಶಿಕ್ಷಕರ ಸಾಹಿತ್ಯ ಸಮ್ಮೇಳನ: ಸಹಸ್ರಾರು ಶಿಕ್ಷಕರು ಸಾಕ್ಷಿ

ಕಲಬುರಗಿ : ದಿನೇ ದಿನೇ ಶಿಕ್ಷಕರ ಮೇಲೆ ಹೆಚ್ಚುತ್ತಿರುವ ಕಾರ್ಯಭಾರದ ಒತ್ತಡ ಸಲ್ಲದು ಎಂದು ವಿಧಾನ ಪರಿಷತ್ ಸದಸ್ಯ ಡಾ. ಶಶೀಲ್ ಜಿ ನಮೋಶಿ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಪ್ರೌಢ ಶಾಲಾ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಆಶ್ರಯದಲ್ಲಿ ನಗರದ ಕನ್ನಡ ಭವನದ ಪ್ರಾಂಗಣದ ಸಾಹಿತ್ಯ ಮಂಟಪದಲ್ಲಿ ರವಿವಾರ ಹಿರಿಯ ಕವಿ ಲಿಂ. ಎಂ.ಎನ್. ಸುಗಂಧಿ ವೇದಿಕೆಯಡಿಯಲ್ಲಿ ಸಾರಸ್ವತ ಲೋಕದ ಶಿಕ್ಷಕರ ಸಮ್ಮಿಲನದ ಜಿಲ್ಲಾ ಪ್ರಥಮ ಶಿಕ್ಷಕರ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕ ಹುದ್ದೆ ಪವಿತ್ರವಾಗಿದ್ದು, ಎಲ್ಲರೂ ಶಿಕ್ಷಕರಾಗಲು ಹಂಬಲಿಸುತ್ತಿದ್ದರು. ಮಕ್ಕೋಇಗೆ ಪಾಠ ಬೋಧನೆ ಮಾಡುತ್ತಾ ಸಾಮಾಜಿಕ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದರು. ಆದರೀಗ ಚುನಾವಣೆ ಕಾರ್ಯ, ಇಲಾಖೆಯ ಮೇಲಾಧಿಕಾರಿಗಳ ಆದೇಶ ಪಾಲನೆಯ ಒತ್ತಡ ಸೇರಿ ಆನ್ ಲೈನ್ ಕಾರ್ಯಭಾರಗಳು ಇಂದು ಶಿಕ್ಷಕರು ಬಿಗಿ ಉಸಿರು ಹಿಡಿದು ಬದುಕುವಂತಾಗಿದೆ. ಇಂದು ಒತ್ತಡ ರಹಿತ ಜೀವನ ಶಿಕ್ಷಕರದಾಗಬೇಕು ಎಂದು ಅವರು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಸಂಪಾದಕತ್ವದ ಗುರು ಕಿರಣ ಕೃತಿ ಬಿಡುಗಡೆ ಮಾಡಿದ ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ, ಜಿಲ್ಲೆಯ ಬಹುಮುಖ ಪ್ರತಿಭೆಯ ಶಿಕ್ಷಕರಿದ್ದಾರೆ. ಒಬ್ಬ ಸಾಹಿತಿ ಶಿಕ್ಷಕರಿಂದ ಮಕ್ಕಳ ಭವಿಷ್ಯ ರೂಪಿಸಿ ಕೊಡುವ ಕೆಲಸ ತುಂಬಾ ಮಹತ್ವದ್ದಾಗಿದೆ. ಶಿಕ್ಷಕ ಸಾಹಿತಿಗಳ ಸಮ್ಮೇಳನ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಚಾರಿತ್ರಿಕವಾಗಿ ಉಳಿಯುತ್ತದೆ. ಜತೆಗೆ ಗುರು ಕಿರಣ ಕೃತಿ ಮೂಲಕ ಸಾಹಿತಿಗಳ ಪರಿಚಯಿಸಿದ್ದು ಅಭಿನಮದನಾರ್ಹ ಕಾರ್ಯ ಎಂದು ಸಂತಸ ವ್ಯಕ್ತಪಡಿಸಿದರು.
ಶಿಕ್ಷಕರ ಸಾಹಿತ್ಯ ಅಕಾಡೆಮಿ ಸ್ಥಾಪನೆಗೆ ಒತ್ತಾಯ: ಸಮ್ಮೇಳನಾಧ್ಯಕ್ಷ ರಾಜೇಂದ್ರ ಝಳಕಿ:
ಶಿಕ್ಷಕರ ಸೃಜನಶೀಲತೆ, ಸಂಶೋಧನೆ, ಪ್ರಕಟಣೆಗೆ ಮತ್ತು ಪ್ರೋತ್ಸಾಹಕ್ಕಾಗಿ ರಾಜ್ಯದಲ್ಲಿ ಪ್ರತ್ಯೇಕ ಶಿಕ್ಷಕರ ಸಾಹಿತ್ಯ ಅಕಾಡೆಮಿ ಸ್ಥಾಪಿಸಬೇಕು ಎಂದು ಜಿಲ್ಲಾ ಪ್ರಥಮ ಶಿಕ್ಷಕರ ಸಾಹಿತ್ಯ ಸಮ್ಮೇಳನಾಧ್ಯಕ್ಷ ರಾಜೇಂದ್ರ ಝಳಕಿ ಇಂದಿಲ್ಲಿ ಸರಕಾರಕ್ಕೆ ಒತ್ತಾಯಿಸಿದರು.
ಇಂದು ಶಿಕ್ಷಕರು ರಚಿಸುವ ಕೃತಿಗಳ ಪ್ರಕಟಣೆ, ಅನುವಾದ ಹಾಗೂ ವಿತರಣೆಗೆ ವಿಶೇಷ ಅನುದಾನದ ನೆರವು ನೀಡಬೇಕು. ಆ ಮೂಲಕ ಶಿಕ್ಷಕರ ಸಾಹಿತ್ಯ ಇನ್ನಷ್ಟು ಪ್ರೋತ್ಸಾಹಿಸಿದಂತಾಗುತ್ತದೆ. ಈ ಕುರಿತು ರಾಜ್ಯ ಸರಕಾರ ಮುತುರ್ವಜಿ ವಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಶಿಕ್ಷಕರ ಮೇಲೆ ಅನೇಕ ಹಲ್ಲೆ, ಒತ್ತಡ ಹಾಗೂ ಮಾನಸಿಕ ಕಿರುಕುಳ ನಿರಂತರ ನಡೆಯುತ್ತಿವೆ. ಇವುಗಳ ನಿಯಂತ್ರಣಕ್ಕೆ ಆಧ್ಯತೆ ನೀಡುವಂತೆ ಮನವಿ ಮಾಡಿದರು.
ಪ್ರತಿ ಜಿಲ್ಲೆಯಲ್ಲಿ ಶಿಕ್ಷಕರ ಸಾಹಿತ್ಯ ಭವನ ಹಾಗೂ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಬೇಕು. ಅತ್ಯುತ್ತಮ ಸಾಹಿತ್ಯ ಕೃಷಿ ಮಾಡುವ ಶಿಕ್ಷಕರಿಗೆ ಪ್ರತಿ ವರ್ಷ ವಿಶೇಷ ಪ್ರಶಸ್ತಿ ನೀಡಿ ಶಿಕ್ಷಕರನ್ನು ಗೌರವಿಸಬೇಕು. ಮಕ್ಕಳಲ್ಲಿ ಸಾಹಿತ್ಯಕ ಚಟುವಟಿಕೆಗಳ ಅಭಿರುಚಿ ಹುಟ್ಟಿಸಬೇಕು. ಇದರಿಂದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ವೃದ್ಧಿಸಲು ಸಾಧ್ಯ. ತೊಗರಿ ನಾಡಿನಲ್ಲಿ ಅನೇಕ ಶಿಕ್ಷಕ ಸಾಹಿತಿಗಳು ತಮ್ಮ ಸಾಹಿತ್ಯಿಕ ಕೃತಿಗಳನ್ನು ನಾಡಿಗೆ ಅರ್ಪಿಸಿದ್ದು, ಅವುಗಳ ಅಧ್ಯಯನ, ಅಧ್ಯಾಪನ ಆಗಬೇಕಾಗಿದೆ. ಸಾಮಾಜಿಕ ಚಿಂತನೆ, ಸಂಸ್ಕೃತಿ ಮೌಲ್ಯಗಳನ್ನು ಬಿತ್ತುತ್ತಿರುವ ಸೃಜನಶೀಲತೆ ವ್ಯಕ್ತಿತ್ವ ಶಿಕ್ಷಕರಲ್ಲಿದೆ. ಈ ದಿಸೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉತ್ತಮ ಕಾರ್ಯ ಮಾಡುತ್ತಿದೆ ಎಂದು ಝಳಕಿ ಅವುರ ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಹಿತ್ಯ, ಸಂಶೋಧನೆ ಮತ್ತು ಶೈಕ್ಷಣಿಕ ಚಟುವಡಿಕೆಗಳಿಗೆ ಪೂರಕ ವಾತಾವರಣ ದೊರೆಯುತ್ತಿಲ್ಲ. ಶಿಕ್ಷಕರ ಸಮಸ್ಯೆಗಳಿಗೆ ಸರಕಾರದ ಜತೆಗೆ ಸಮುದಾಯದ ಪಾತ್ರವೂ ಮುಖ್ಯವಾಗಿದೆ ಎಂದರು.
ಶಿಕ್ಷಕರು ಕನ್ನಡ ಕಾವಲುಗಾರರಾಗಿದ್ದಾರೆ: ತೇಗಲತಿಪ್ಪಿ ಅಭಿಮತ
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ರಾಷ್ಟç ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಅಭಿವೃದ್ಧಿ ಪಥದಲ್ಲಿಶಿಕ್ಷಕರ ಕಾರ್ಯಕ್ಷಮತೆ ತುಂಬಾ ಪರಿಣಾಮಕಾರಿಯಾಗಿದೆ. ಮಕ್ಕಳಿಗೆ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತಿ ಸುಸಂಸ್ಕೃತ ಸಮಾಜ ಕಟ್ಟುತ್ತಾರೆ. ಸಮನ್ವಯತೆ ಕೊಂಡಿಯಾಗಿ ಭಾವ ಬೆಸುಗೆಗಳ ಸೇತುವೆಯಾಗಿ ಶಿಕ್ಷಕರು ಕಾರ್ಯನಿರ್ವಹಿಸುತ್ತಾರೆ. ಪ್ರತಿಭಾವಂತ ಶಿಕ್ಷಕರಿಂದಲೇ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧ್ಯ. ಅವರಲ್ಲಿನ ಕಲೆ, ಸಾಹಿತ್ಯ, ಸಂಗೀತ ಕಲೆಗಳ ವಿದ್ವತ್ತು ಇಂದು ಭವಿಷ್ ರೂಪಿಸಬಲ್ಲರು. ಅನೇಕ ಶಿಕ್ಷಕರು ಸಾಹಿತಿ, ಸಂಗೀತಗಾರರು ಕೂಡ ಆಗಿದ್ದಾರೆ. ಶಿಕ್ಷಕರು ಕನ್ನಡದ ಕಾವಲುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.
ಶಿಕ್ಷಕರ ಸಂಘದ ಮಹೇಶ ಹೂಗಾರ, ಸಂತೋಷ ಗಂಗೂ, ಸೇವಂತಾ ಪಿ. ಚವ್ಹಾಣ, ನೀಲಕಂಠ ಜಮಾದಾರ, ಚಂದ್ರಕಾAತ ಏರಿ, ಮಲ್ಲಿನಾಥ ನಾಗನಹಳ್ಳಿ, ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ, ಧರ್ಮರಾಜ ಜವಳಿ, ರಾಜೇಂದ್ರ ಮಾಡಬೂಳ, ಸೋಮಶೇಖರಯ್ಯ ಹೊಸಮಠ, ಗಣೇಶ ಚಿನ್ನಾಕಾರ ಸಿದ್ಧಲಿಂಗ ಬಾಳಿ, ಸಿದ್ಧಾರಾಮ ಹಂಚನಾಳ, ರವಿ ಶಹಾಪೂರಕರ್, ಎಸ್.ಕೆ. ಬಿರಾದಾರ, ನಾಗಪ್ಪ ಸಜ್ಜನ್, ವೀರಭದ್ರಪ್ಪ ಗುರುಮಿಟಕಲ್, ಸುರೇಶ ದೇಶಪಾಂಡೆ, ಸುರೇಶ ಲೇಂಗಟಿ, ಸಂತೋಷ ಕುಡಳ್ಳಿ , ಪ್ರಕಾಶ ಗೊಣಗಿ ಇತರರು ಉಪಸ್ಥಿತರಿರುವರು.
ಶಿಕ್ಷಕ ಸಾಹಿತಿಗಳಾದ ಡಾ. ಪ್ರಮೀಳಾ ಪಾಟೀಲ ಬಿಬ್ಬಳ್ಳಿ, ಬಸವರಾಜ ಐನೋಳ್ಳಿ, ಮಂಗಲಾ ಕಪರೆ, ಪ್ರಭು ಫುಲಾರಿ ಕರ್ಜಗಿ, ಲೀಲಾವತಿ ಕುಲಕರ್ಣಿ, ಅಂಬಾರಾಯ ಮಡ್ಡೆ, ಗಿರಿಮಲ್ಲಪ್ಪ ವಳಸಂಗ, ಆರ್.ಹೆಚ್. ಪಾಟೀಲ, ಸಂತೋಷ ಹೂಗಾರ ಅವರನ್ನು ಗುರು ಗೌರವ ಪುರಸ್ಕಾರ ನೀಡಿ ಸತ್ಕರಿಸಲಾಗುವುದು.
ಗಮನ ಸೆಳೆದ ಅರಿವು ಅನಾವರಣ ಗೋಷ್ಠಿ:
ಶೈಕ್ಷಣಿಕ ಸಮಸ್ಯೆಗಳು-ಪರಿಹಾರೋಪಾಯಗಳು ಕುರಿತು ಗಿರೀಶ ಕಡ್ಲೇವಾಡ, ಗುಣಮಟ್ಟದ ಶಿಕ್ಷಣದಲ್ಲಿ ಶಿಕ್ಷಕರ ಪಾತ್ರ ಕುರಿತು ಸಾಹೇಬಗೌಡ ಯ ಬಿರಾದಾರ, ಸಮ್ಮೇಳನಾಧ್ಯಕ್ಷರ ಬದುಕು-ಬರಹ ಕುರಿತು ಡಾ. ಡಿ.ಎನ್. ಪಾಟೀಲ ಮಾತನಾಡಿದರು. ಕಲ್ಯಾಣಕುಮಾರ ಶೀಲವಂತ ದಿಕ್ಸೂಚಿ ನುಡಿಗಳನ್ನಾಡಲಿದ್ದಾರೆ. ಚಂದ್ರಕಾAತ ಬಿರಾದಾರ, ನಂದಿನಿ ಸನಬಾಳ, ರೇಣುಕಾ ಡಾಂಗೆ, ಚಂದ್ರಶೇಖರ ಪಾಟೀಲ, ಕವಿತಾ ಹಳ್ಳಿ ವೇದಿಕೆ ಮೇಲಿದ್ದರು.
ಶಿಕ್ಷಕ ಸಾಹಿತಿ ಅನುಪಮಾ ಅಪಗುಂಡೆ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾವ್ಯ ಶಿಕ್ಷಣ ಶಿಕ್ಷಕರ ಕವಿಗೋಷ್ಠಿಗೆ ಪರಮೇಶ್ವರ ಓಕಳಿ, ರಾಜೇಶ ನೀಲಹಳ್ಳಿ, ಮಹೇಶಕುಮಾರ ಹೆಬ್ಬಾಳೆ, ಮಲ್ಲಿಕಾರ್ಜುನ ದೇವರಗುಡಿ, ವಿಶಾಲಾಕ್ಷಿ ಮಾಯಣ್ಣನವರ್ ಉಪಸ್ಥಿತರಿರುವರು.
ಶಿಕ್ಷಕರ ಸಾಹಿತ್ಯ ಸಮ್ಮೇಳನ ನಾಡಿಗೆ ಮಾದರಿ: ಮುಡುಬಿ ಗುಂಡೇರಾವ
ಸಮಾರೋಪ ನುಡಿಗಳನ್ನಾಡಿದ ಸಂಶೋದಕ ಸಾಹಿತಿ ಮುಡುಬಿ ಗುಂಡೇರಾವ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ಪ್ರಥಮ ಶಿಕ್ಷಕರ ಸಾಹಿತ್ಯ ಸಮ್ಮೇಳನ ಇಡೀ ನಾಡಿಗೆ ಮಾದರಿಯಾಗಿದೆ. ಈ ನೆಲದ ಮಣ್ಣು ಮೆಟ್ಟಿದವರಿಗೆ ಕನ್ನಡಮ್ಮನ ದರ್ಶನ ದೊರೆಯುತ್ತದೆ. ಅಂಥ ಶಕ್ತಿ ಈ ನಾಡಿನ ನೆಲಕ್ಕಿದೆ. ನಾವೆಲ್ಲ ನಾಡು ನುಡಿಯ ಸೇವಕರಾಗಬೇಕು. ಆಗ ನಮಗೆ ಭಾವ ಬೆಳಕು ಮೂಡುತ್ತದೆ. ನಾವು ಶಿಕ್ಷಕರ ಸಮಸ್ಯೆ ಹಗೂ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೋರಾಟ ಮಾಡಬೇಕಾಗಿಎ. ಹಿಂದಿನAತೆ ಶಿಕ್ಷಕರ ವೃತ್ತಿ ಜೀವನ ಜಟಿಲವಾಗಿದ್ದರೂ ನೂರಾರು ಒತ್ತಡಗಳಿಂದಬದುಕಬೇಕಾಗಿದೆ. ಆದರೂ ಆ ವೃತ್ತಿ ಸರಕಾರದ ಆದೇಶದಂತೆ ಸಮರ್ಥವಾಗಿ ನಿಭಾಯಿಸಿದ್ದೇವೆ ಎಂದು ಹೇಳಿದರು. ಬರುವ ದಿನಗಳಲ್ಲಿ ಇಂಥ ಸಮ್ಮೇಳನಗಳು ಮಾಡುವ ಮೂಲಕ ಇಲ್ಲಿಯ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು. ಪ್ರೊ.ಎಸ್.ಎಲ್. ಪಾಟೀಲ, ಬಾಬುರಾವ ಜಮಾದಾರ, ಶರಣಬಸಪ್ಪ ಸುಗೂರ, ಪರಮಾನಂದ ಸರಸಂಬಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.



