ಜಿಲ್ಲಾಸುದ್ದಿ

ಮಹಾದೇವಿಯಕ್ಕಗಳ ಸಮ್ಮೇಳನದಲ್ಲಿ ಉಮಾ ಮಾಲಿಪಾಟೀಲ್ ಗೌರವ ಸನ್ಮಾನ

ಕಲಬುರ್ಗಿ, ಜೂ.೨೯- ನಗರದ ಜಯನಗರದ ಅನುಭವ ಮಂಟಪದಲ್ಲಿ ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬಸವ ಸಮಿತಿ, ಅಕ್ಕನ ಬಳಗದ ವತಿಯಿಂದ ಜರುಗಿದ ಮಹಾದೇವಿಯಕ್ಕಗಳ ಸಮ್ಮೇಳನ ೧೬ರಲ್ಲಿ ಶ್ರೀಮತಿ ಉಮಾ ಸಿ. ಮಾಲಿಪಾಟೀಲ್ (ಟೀಕಾಬಾಯಿ) ಅವರೂ ಸೇರಿದಂತೆ ಹಲವರು ಸಾಧಕಿಯರಿಗೆ ಗೌರವ ಸನ್ಮಾನ ಮಾಡಲಾಯಿತು.

ಶಿಕ್ಷಕಿ ಶ್ರೀಮತಿ ಶಾರದಾ ರಾಂಪುರೆ, ಶ್ರೀಮತಿ ಶಶಿಕಲಾ ಸಾಲೂಕ್ಯ, ಶ್ರೀಮತಿ ಶಾಂತಾ ಪಾಟೀಲ್, ಶ್ರೀಮತಿ ನಂದಾ ಪಾಟೀಲ್ ಅವರಿಗೆ ಗೌರವಿಸಲಾಯಿತು. ನೇತೃತ್ವವನ್ನು ಬಸವ ಸಮಿತಿಯ ಜಿಲ್ಲಾಧ್ಯಕ್ಷೆ ಡಾ. ವಿಲಾಸವತಿ ಖೂಬಾ ಅವರು ವಹಿಸಿದ್ದರು. ಡಾ. ಜಯಶ್ರೀ ದಂಡೆ ಅವರೂ ಸೇರಿದಂತೆ ಹಲವರಾರು ಗಣ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಡಾ. ಶಿವಲೀಲಾ ಚಟ್ನಳ್ಳಿ ಅವರು ಮಾತನಾಡಿದರು. ಸಾಹಿತಿಗಳಾದ ಡಾ. ಗಂಗಮ್ಮ ಸತ್ಯಂಪೇಟೆ ಅವರಿಗೆ ಅಕ್ಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯ ಐವರು ಹಿರಿಯ ಶಿಕ್ಷಕರು ಒಂದೇ ಶಾಲೆಯಲ್ಲಿ ೩೫ ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರಿಂದ ಅವರಿಗೂ ಸಹ ಸನ್ಮಾನಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button