ಕಲಬುರ್ಗಿಯಲ್ಲಿ ಜುಲೈ ೧೨ಕ್ಕೆ ಬಂಜಾರಾ ಸಮಾಜದ ಗೋರ್ ಗುಣವಂತ ವಿದ್ಯಾರ್ಥಿ ಸತ್ಕಾರ ಮಳಾವ್

ಕಲಬುರ್ಗಿ, ಜೂ.೨೯- ನಗರದ ಐವಾನ್ ಶಾಹಿ ಅತಿಥಿ ಗೃಹದ ಪ್ರದೇಶದಲ್ಲಿರುವ ಬಂಜಾರಾ ಭವನದಲ್ಲಿ ಇದೇ ಜುಲೈ ೧೨ರಂದು ಬೆಳಿಗ್ಗೆ ೧೦-೩೦ಕ್ಕೆ ಬಂಜಾರಾ ಸಮಾಜದ ಗೋರ ಗುಣವಂತ ವಿದ್ಯಾರ್ಥಿ ಸತ್ಕಾರ ಮಳಾವ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗೋರ ಸಿಕವಾಡಿ ಕರ್ನಾಟಕ ಕಟಮಾಳೋ ಚಾರಿಟೇಬಲ್ ಟ್ರಸ್ಟ್ನ ಡಾ. ಗೋಪಿಚಂದ್ ಬಾಣೋತ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಜಾರಾಸಮಾಜದ ಎಸ್ಎಸ್ಎಲ್ಸಿ ಮತ್ತು ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಶೇಕಡಾ ೭೫ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮತ್ತು ಪಿಎಚ್ಡಿ, ನೀಟ್, ಕೆಸೆಟ್, ನೆಟ್, ಜೆಇಇ ಉತ್ತೀರ್ಣರಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸತ್ಕಾರ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸುಮಾರು ೧೫೦ಕ್ಕಿಂತ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿದ್ಯಾರ್ಥಿಗಳ ನೊಂದಣಿ ಚಾಲ್ತಿಯಲ್ಲಿದ್ದು, ಇದೇ ಜುಲೈ ೭ರೊಳಗೆ ನೊಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದ ಅವರು, ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಪಾಲಕರನ್ನೂ ಸಹ ಸತ್ಕರಿಸಲಾಗುವುದು. ಕಾರ್ಯಕ್ರಮವು ರಾಯಸೀನಾ ಫೌಂಡೇಶನ್ ಸಹಯೋಗದಲ್ಲಿ ಜರುಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ರವೀಂದ್ರ ರಾಠೋಡ, ವಿಠಲ್ ಜಾಧವ್, ವಿನೋದ್ ರಾಠೋಡ, ರಾಮಜೀ ರಾಠೋಡ, ಪ್ರೇಮಸಿಂಗ್ ಚವ್ಹಾಣ್, ಅಣ್ಣಪ್ಪ ಜಾಧವ್ ಮುಂತಾದವರು ಉಪಸ್ಥಿತರಿದ್ದರು.



