ಜಿಲ್ಲಾಸುದ್ದಿಸಾಂಸ್ಕೃತಿಕ

ಸೇಡಂನಲ್ಲಿ ನ. 2ರಂದು ನೃಪತುಂಗ ನಾಟಕೋತ್ಸವ

ಯೋಧರು, ರೈತರಿಗೆ ಗೌರವ ಸನ್ಮಾನ; ವಿವಿಧ ಕ್ಷೇತ್ರಗಳ ಸಾಧಕರಿಗೆ ರಂಗ ನೃಪತುಂಗ ಪ್ರಶಸ್ತಿ ಪ್ರದಾನ

ಕಲಬುರಗಿ, ಅ. 28: ಜಿಲ್ಲೆಯ ಸೇಡಂ ಪಟ್ಟಣದ ಸುವರ್ಣ ಕರ್ನಾಟಕ ಭವನದಲ್ಲಿ ನವೆಂಬರ್ 2ರಂದು ಬೆಳಿಗ್ಗೆ 10.30ಕ್ಕೆ ನೃಪತುಂಗ ಹವ್ಯಾಸಿ ಕಲಾವಿದರ ನಾಟಕ ಸಂಘದ ಐದನೇ ವಾರ್ಷಿಕೋತ್ಸವ ಹಾಗೂ ನಾಟಕೋತ್ಸವ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಯೋಧರು ಮತ್ತು ರೈತರನ್ನು ಗೌರವಿಸಿ ಸನ್ಮಾನಿಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ರಂಗ ನೃಪತುಂಗ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಸಂಗಣ್ಣ ಅಲ್ದಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಯ್ಯಸ್ವಾಮಿ ಮಠದ ಮೂಲಮಣಿ ವಿರಚಿತ ‘ಶ್ರೀ ಶಿವಶಂಕರೇಶ್ವರ ಮಹಾತ್ಮೆ’ ಆಧ್ಯಾತ್ಮಿಕ ನಾಟಕದ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಲ್ಲಿನಾಥ ಮಹಾರಾಜರು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಶಿವಶಂಕರ ಶಿವಾಚಾರ್ಯರು, ಪಂಚಾಕ್ಷರ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು, ಪ್ರಕಾಶ ತಾತನವರ ಹಾಗೂ ನಾಗಪ್ಪಯ್ಯ ಅವರು ಸಾನ್ನಿಧ್ಯ ವಹಿಸಲಿದ್ದಾರೆ. ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲಾಭಿವೃದ್ಧಿ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಶಿವಲಿಂಗರಡ್ಡಿ ಪಾಟೀಲ ಬೆನಕನಹಳ್ಳಿ, ಸಂದೇಶ ಶ್ಯಾಂಡಿ, ರಾಜಶೇಖರ ರೆಡ್ಡಿ, ಶಾಜೀರಾವ್ ಪಾಟೀಲ, ಶಾಮರಾವ್ ಕೊರವಿ, ಬಸವರಾಜ ಪಾಟೀಲ ನಂದೂರು ಹಾಗೂ ಶ್ರೀಮತಿ ನರಸಮ್ಮ ಲಕ್ಷ್ಮಣ ಅವಂಟಿ ಅವರು ಜ್ಯೋತಿ ಪ್ರಜ್ವಲಿಸಲಿದ್ದಾರೆ ಎಂದು ತಿಳಿಸಿದರು.

ಬಾಲರಾಜ್ ಗುತೇದಾರ, ರಾಜಶೇಖರ ನೀಲಂಗಿ, ರಾಜಶೇಖರ ಪುರಾಣಿಕ ಮಳಖೇಡ, ಶಿವಾಜಿ ಆರ್. ತೆಂಗಲಿ, ವೈಜನಾಥ ಜಳಕಿ, ವಿಜಯಕುಮಾರ ಆಡಕಿ, ಬಸವರಾಜ ಭೂತಪೂರ, ಚಂದ್ರಶೇಖರ ಕರ್ಜಗಿ, ಸೋಮಶೇಖರ ಪಾಟೀಲ, ರಮೇಶ ಕೋರಿಶೆಟ್ಟಿ, ಗೋಪಾಲ ಭಾಜಪಲ್ಲಿ ಹಾಗೂ ಭಂಡಾರೆಡ್ಡಿ ಪಾಟೀಲ ಅವರು ರಂಗಭೂಮಿ ಪೂಜೆ ನೆರವೇರಿಸಲಿದ್ದಾರೆ.

ಶ್ರೀ ಕೊತ್ತಲ ಬಸವೇಶ್ವರರು, ನೃಪತುಂಗ ಮಹಾರಾಜರು, ಶ್ರೀ ಹಾನಗಲ್ ಕುಮಾರಸ್ವಾಮಿಗಳು ಹಾಗೂ ಪಂಡಿತ ಪುಟ್ಟರಾಜ ಗವಾಯಿಗಳ ಭಾವಚಿತ್ರಗಳಿಗೆ ಗಣ್ಯರು ಪೂಜೆ ಸಲ್ಲಿಸಲಿದ್ದಾರೆ. ಕಾರ್ಯಕ್ರಮಕ್ಕೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.

ರಂಗ ನೃಪತುಂಗ ಪ್ರಶಸ್ತಿ ಪ್ರದಾನ

ನಾಟಕೋತ್ಸವದ ಅಂಗವಾಗಿ ರಂಗ ನೃಪತುಂಗ ಪ್ರಶಸ್ತಿಯನ್ನು ರಂಗಾಯಣದ ಮಾಜಿ ನಿರ್ದೇಶಕ ಪ್ರಭಾಕರ ಜೋಶಿ, ಬೆಳಗಾವಿಯ ಕವಿ ರಮೇಶ ಎಚ್. ಬಡಿಗೇರ, ಬಳ್ಳಾರಿಯ ಮೋಹನ ಜಿ.ಎಂ., ರಾಮದುರ್ಗದ ಮಂಜುನಾಥ ಹಿರೇಮಠ, ಬಾದಾಮಿಯ ರಾಜ ಮಹಮ್ಮದ್ ಮುಲ್ಲಾ, ಬೆಳಗಾವಿಯ ಎಚ್.ವೈ. ವಡ್ಡರ, ಬಿಲಕಲ್‌ನ ಆಯಿಲ್ ರೆಡ್ಡಿ ಪೊಲೀಸ್ ಪಾಟೀಲ, ಶರಣಿವಾಸ ಸರಡಗಿ, ವಿಶ್ವನಾಥ ಪಾಟೀಲ, ಶರಣು ಮಹಾಗಾಂವ, ಶೇಖರ ನಾಟಿಕಾರ, ರೇವಣಸಿದ್ಧಪ್ಪ ಚೋಚ, ವೆಂಕಟೇಶ ಕುಲಕರ್ಣಿ, ಮೋಹನರೆಡ್ಡಿ, ಮಲ್ಲಿಕಾರ್ಜುನ ಸಾಹು, ಭೀಮರಾವ್ ಮಾಲಿಪಾಟೀಲ, ಈಶಪ್ಪ ಎಸ್. ಜಮಾದಾರ, ಅಮಶೆಟ್ಟಿ ಎಸ್. ಪೊಲೀಸ್ ಪಾಟೀಲ, ಮಲ್ಲಿಕಾರ್ಜುನ ಎಸ್. ಹಡಗಲಕರ್, ಶಿವಪುತ್ರಪ್ಪ ಆರ್., ಬೆಳಗಾವಿಯ ವಾಸುದೇವ ಸಸಲಾಟಿ, ಹೂಡಾ(ಬಿ)ಯ ಮಹೇಶ ಪೈಲ್ವಾನಮಾದಾರ, ಬಿಬ್ಬಳ್ಳಿಯ ಹನುಮಂತರಾವ್ ಎಸ್. ಬಿರಾದಾರ, ಲಲಿತಾ ಎಸ್. ಕೋಕಟ್ ಹಾಗೂ ಮಲ್ಲು ಮಾಸ್ಟರ್ ಭಜಂತ್ರಿ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷರು ತಿಳಿಸಿದರು.

ವಿಶೇಷ ಆಹ್ವಾನಿತರಾಗಿ ಕವಿತಾ ಮಿಶ್ರಾ ಹಾಗೂ ಮಂಜು ಪಾಂಡವಪುರ ಆಗಮಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶಿವಯ್ಯಸ್ವಾಮಿ ಬಿಬ್ಬಳ್ಳಿ, ಗುರುಪ್ಪ ಪಾಟೀಲ, ಈರಣಗೌಡ, ವೀರೇಶ ಅಳ್ಳೊಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button