ಜಿಲ್ಲಾಸುದ್ದಿ

ಕಾರ್ಯಕರ್ತರ ಗೋಳು ಕೇಳದಿದ್ದರೆ ಕಾಂಗ್ರೆಸ್‌ಗೆ ಪಕ್ಷತ್ಯಾಗದ ಬಿಸಿ: ಶಿವಶಂಕರ ಗುಂಡಗುರ್ಥಿ ಎಚ್ಚರಿಕೆ

ಜೇವರ್ಗಿ, ನ. 11: ಕಾಂಗ್ರೆಸ್ ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸದೆ ನಿರ್ಲಕ್ಷಿಸಿದರೆ ಅನೇಕ ಕಾರ್ಯಕರ್ತರು ಪಕ್ಷ ತೊರೆಯುವ ಸಾಧ್ಯತೆಯಿದೆ ಎಂದು ಪಕ್ಷದ ಮುಖಂಡ ಶಿವಶಂಕರ ಗುಂಡಗುರ್ಥಿ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಬಹಳ ದಿನಗಳಾದರೂ ತಾಲ್ಲೂಕಿನಲ್ಲಿ ಪಕ್ಷದ ಕಾರ್ಯಕರ್ತರಿಗೆ ಯಾವುದೇ ಕೆಲಸ ಕಾರ್ಯಗಳು ದೊರೆಯದೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಯಕರ್ತರ ಅಳಲಿಗೆ ಸಂಬಂಧಪಟ್ಟ ಸಚಿವರು ಸ್ಪಂದಿಸಬೇಕು. ಕೂಡಲೇ ಅವರ ಗಮನ ಸೆಳೆದು ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರವೂ ಕಾರ್ಯಕರ್ತರಿಗೆ ಯಾವುದೇ ರೀತಿಯ ಕೆಲಸಗಳು ದೊರೆಯದೆ ನಿರಾಶೆ ಎದುರಾಗಿದೆ. ಕಾರ್ಯಕರ್ತರ ನೋವಿಗೆ ಸಚಿವರು ಸ್ಪಂದಿಸದಿದ್ದರೆ ಅನೇಕರು ಪಕ್ಷ ತೊರೆಯುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಪಕ್ಷದ ನಾಯಕರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಲ್ಲದೆ, ರಾಜ್ಯ ಸರ್ಕಾರದ ನಿಗಮ ಮಂಡಳಿಗಳಲ್ಲಿ ಕಾರ್ಯಕರ್ತರಿಗೆ ಅಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನಗಳನ್ನು ನೀಡದಿರುವುದೂ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಪಕ್ಷದ ಕಾರ್ಯಕರ್ತರಿಗೆ ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಶಿವಶಂಕರ ಗುಂಡಗುರ್ಥಿ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button