ಶಿಕ್ಷಣ

ಕೇಂದ್ರಿಯ ವಿಶ್ವವಿದ್ಯಾಲಯದಿಂದ ಮೂವರಿಗೆ ಪಿಎಚ್.ಡಿ ಪದವಿ ಘೋಷಣೆ

ಸಂಶೋಧನಾ ಮಹಾಪ್ರಬಂಧ ಪೂರ್ಣಗೊಳಿಸಿದ ಮೂವರು ಸಂಶೋಧನಾ ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ

ಕಲಬುರಗಿ, ಆ.25- ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯವು (ಸಿಯುಕೆ) ಮೂವರು ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಮಹಾಪ್ರಬಂಧಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಭೌತ ವಿಜ್ಞಾನಗಳ ನಿಕಾಯದ ಗಣಿತಶಾಸ್ತ್ರ ವಿಭಾಗ ಹಾಗೂ ಭೂ-ವಿಜ್ಞಾನ ನಿಕಾಯದ ಭೂಗೋಳಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಿ ಘೋಷಿಸಿದೆ.

ಭೌತ ವಿಜ್ಞಾನಗಳ ನಿಕಾಯದ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಕು. ಅತಿರಾ ವಿ.ಎಸ್. ಅವರು ‘ಇನ್ವೆಸ್ಟಿಗೇಷನ್ ಆನ್ ಕಂಟ್ರೋಲ್ಯಾಬಿಲಿಟಿ ಅಂಡ್ ಅಬ್ಸರ್ವ್ಯಾಬಿಲಿಟಿ ಪ್ರಾಪರ್ಟೀಸ್ ಇನ್ ಎ ಕ್ಲಾಸ್ ಆಫ್ ಹೆಟೆರೋಜೀನಿಯಸ್ ಮಲ್ಟಿ ಏಜೆಂಟ್ ಸಿಸ್ಟಮ್ಸ್’ ವಿಷಯದ ಕುರಿತು ಸಂಶೋಧನಾ ಮಹಾಪ್ರಬಂಧ ಸಲ್ಲಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಜಿ. ಜನಾರ್ಧನ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಅವರು ಸಂಶೋಧನೆ ಕೈಗೊಂಡಿದ್ದರು.

ಭೂ-ವಿಜ್ಞಾನ ನಿಕಾಯದ ಭೂಗೋಳಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಕು. ಇರ್ಷಾದ್ ತಾರಾಯಲ್ ಅವರು ‘ಅಸೆಸ್ಮೆಂಟ್ ಆಫ್ ಸ್ಪೀಟ್ಸ್ ಅಂಡ್ ಚಾಲೆಂಜಸ್ ಇನ್ ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಇನ್ ಕಲಬುರಗಿ ಸಿಟಿ ಯುಸಿಂಗ್ ಜಿಐಎಸ್’ ವಿಷಯದ ಕುರಿತು ಸಂಶೋಧನಾ ಮಹಾಪ್ರಬಂಧ ಸಲ್ಲಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಭೂಗೋಳಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಬಿ. ಮಹಾಲಿಂಗಂ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.

ಅದೇ ವಿಭಾಗದ ಸಂಶೋಧನಾ ವಿದ್ಯಾರ್ಥಿ ಕು. ಹರೇಕೃಷ್ಣ ಮನ್ನಾ ಅವರು ‘ಚಾಲೆಂಜಸ್ ಆಫ್ ಅರ್ಬನ್ ಲ್ಯಾಂಡ್‌ಸ್ಕೇಪ್ ಮಾರ್ಫಾಲಜಿ ಅಂಡ್ ಇಟ್ಸ್ ಅಸೋಸಿಯೇಷನ್ ವಿತ್ ಅರ್ಬನ್ ಎನ್ವಿರಾನ್‌ಮೆಂಟ್, ಹೆಲ್ತ್ ಅಂಡ್ ವೆಲ್‌ಬೀಯಿಂಗ್: ಎ ಕೇಸ್ ಸ್ಟಡಿ ಆಫ್ ಆನ್ ಇಂಡಸ್ಟ್ರಿಯಲ್ ಸಿಟಿ–ಅಸನ್ಸೋಲ್, ವೆಸ್ಟ್ ಬೆಂಗಾಲ್’ ವಿಷಯದ ಕುರಿತು ಸಂಶೋಧನಾ ಮಹಾಪ್ರಬಂಧ ಸಲ್ಲಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಭೂಗೋಳಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಸಂಜಿತ್ ಸರ್ಕಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಪಿಎಚ್.ಡಿ ಪದವಿ ಪಡೆದ ಮೂವರು ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಅವರ ಮಾರ್ಗದರ್ಶಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ಶೈಕ್ಷಣಿಕ ಹಾಗೂ ವೃತ್ತಿಪರ ಜೀವನದಲ್ಲಿ ಇನ್ನಷ್ಟು ಯಶಸ್ಸು ದೊರೆಯಲಿ ಎಂದು ಶುಭ ಹಾರೈಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button