ಅಧೀಶ್ ಆರ್. ವಾಲಿಗೆ ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿ ಗರಿ
ರೋಟರಿ ಇಂಟರ್ನ್ಯಾಷನಲ್ ಜಿಲ್ಲಾ 3160 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೀದರ್ ಸಿಲ್ವರ್ಸ್ಟಾರ್ ರೋಟರಿ ಕ್ಲಬ್ಗೆ 10 ಪ್ರತಿಷ್ಠಿತ ಪ್ರಶಸ್ತಿಗಳು

ಬೀದರ್, ಆ.4: ಗೋವಾದಲ್ಲಿ ನಡೆದ ರೋಟರಿ ಇಂಟರ್ನ್ಯಾಷನಲ್ ಜಿಲ್ಲಾ 3160 (ಕರ್ನಾಟಕ ಹಾಗೂ ಆಂಧ್ರಪ್ರದೇಶ) ಅಂತರರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೀದರ್ ಸಿಲ್ವರ್ಸ್ಟಾರ್ ರೋಟರಿ ಕ್ಲಬ್ ಒಟ್ಟು 10 ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದು ಹೊಸ ಸಾಧನೆ ಮಾಡಿದೆ.
ಕ್ಲಬ್ ಅಧ್ಯಕ್ಷ ಅಧೀಶ್ ಆರ್. ವಾಲಿ ಹಾಗೂ ಅವರ ತಂಡದ ಅನುಕರಣೀಯ ಸೇವಾ ಕಾರ್ಯಗಳನ್ನು ಗುರುತಿಸಿ ಈ ಗೌರವಗಳನ್ನು ನೀಡಲಾಯಿತು. ಪ್ರಶಸ್ತಿಗಳಲ್ಲಿ ಅತ್ಯಂತ ಪ್ರತಿಷ್ಠಿತವಾದ **’ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿ’**ಯನ್ನು ಅಧೀಶ್ ಆರ್. ವಾಲಿ ಸ್ವೀಕರಿಸಿದರು. ಜೊತೆಗೆ ಸಮುದಾಯ ಸೇವೆ, ವೃತ್ತಿಪರ ಸೇವೆ, ಶಾಶ್ವತ ಸೇವಾ ಯೋಜನೆ, ಜನಸಂಪರ್ಕ ಯೋಜನೆ, ನಿಧಿ ಸಂಗ್ರಹಣೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕ್ಲಬ್ ಅತ್ಯುತ್ತಮ ಸಾಧನೆಗಾಗಿ ಪ್ರಶಂಸೆಗೆ ಪಾತ್ರವಾಯಿತು.
ವೈಭವೋಪೇತ ಸಮಾರಂಭದಲ್ಲಿ ಐಪಿಡಿಜಿ ಎಂ.ಕೆ. ರವೀಂದ್ರ, ಡಿಜಿ ಕೆ. ರೆಡ್ಡಿ, ಡಿಜಿ ಡಾ. ಲೆನ್ನಿ ಡಿ ಕಾಸ್ಟ್, ಪಿಡಿಜಿ ಮಧುಪ್ರಸಾದ್, ರಘು ಕೃಷ್ಣಮೂರ್ತಿ, ರವಿ ಮುಳೆ, ಹವೆಟ್ಟಿ ಪಾಟೀಲ್, ಡಾ. ರಜನೀಶ್ ವಾಲಿ, ಅಂಜನಾ ವಾಲಿ, ಮನೀಶ್ ಸಿಂಡೋಲ್, ನವೀನ್ ಗೋಯಲ್, ಭವೇಶ್ ಪಟೇಲ್, ಗಣೇಶ್ ಪಾಟೀಲ್ ಹಾಗೂ ಹರ್ಷದ್ ಪಟೇಲ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದು, ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು.



