ರಾಮಮಂದಿರ ಅಕ್ರಮಕ್ಕೂ, ಶಾಸಕ ಪ್ರಭು ಚವ್ಹಾಣರಿಗೂ ನಂಟು: ಎಸ್ಐಟಿಗೆ ದೂರು

ಬೀದರ್, ಜೂ.೨೯- ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಹಣದ ಅಕ್ರಮ ಹಾಗೂ ಲೂಟಿಯ ಆರೋಪಗಳ ಸರಣಿ ಇದೀಗ ಕರ್ನಾಟಕದ(ಏಚಿಡಿಟಿಚಿಣಚಿಞಚಿ) ಗಡಿ ಜಿಲ್ಲೆಗೂ ವ್ಯಾಪಿಸಿದೆ. ಔರಾದ್ ತಾಲ್ಲೂಕಿನ ಚಾಂದೂರಿ ಗ್ರಾಮದ ನಿವಾಸಿ ದೀಪಕ್ ಪಾಟೀಲ್ ಎಂಬುವವರು ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಪ್ರಭು ಚವಾಣ್ ಅವರೂ ಸೇರಿದಂತೆ ಮೂವರ ವಿರುದ್ಧ ಅಯೋಧ್ಯೆ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ದೂರು ದಾಖಲಿಸುವ ಮೂಲಕ ಸಂಚಲನ ಮೂಡಿಸಿದ್ದಾರೆ. ಲಕ್ನೋ ವಿಭಾಗೀಯ ಆಯುಕ್ತ ವಿಜಯ್ ವಿಶ್ವಾಸ್ ಪಂತ್ ಅವರಿಗೆ ದೀಪಕ್ ಪಾಟೀಲ್ ಅವರು ಅಂಚೆ ಮೂಲಕ ದೂರನ್ನು ರವಾನಿಸಿದ್ದಾರೆ.
ದೂರುದಾರ ದೀಪಕ್ ಪಾಟೀಲ್ ಅವರು ನೀಡಿರುವ ದೂರಿನಲ್ಲಿ ಗಂಭೀರ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಹಿಂದೆ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಕಾರ್ಯ ಪ್ರಾರಂಭವಾದ ಸಮಯದಲ್ಲಿ, ಆರ್ಎಸ್ಎಸ್ ಪ್ರಮುಖ ಗೋಪಾಲಜಿ ಹಾಗೂ ಔರಾದ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚವಾಣ್ ಅವರಿಬ್ಬರೂ ಜೊತೆಗೂಡಿ ಔರಾದ್ ತಾಲ್ಲೂಕಿನ ಪ್ರಭಾವಿ ಗುತ್ತಿಗೆದಾರರಿಂದ ರಾಮಮಂದಿರದ ಹೆಸರಿನಲ್ಲಿ ಲೆಕ್ಕಕ್ಕೆ ಸಿಗದ ಕೋಟ್ಯಂತರ ರೂ.ಗಳ ದೇಣಿಗೆ ಮೊತ್ತವನ್ನು ಸಂಗ್ರಹಿಸಿದ್ದರು. ಆದರೆ, ಆ ಹಣವನ್ನು ಅಧಿಕೃತವಾಗಿ ಟ್ರಸ್ಟ್ಗೆ ತಲುಪಿಸದೆ ಇಬ್ಬರೂ ಸೇರಿ ಸಂಪೂರ್ಣವಾಗಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಹಣದ ಅಕ್ರಮ ದುರುಪಯೋಗದ ಜಾಲದಲ್ಲಿ ಕೇವಲ ರಾಜಕಾರಣಿಗಳಷ್ಟೇ ಅಲ್ಲದೆ ಉದ್ಯಮಿಗಳೂ ಭಾಗಿಯಾಗಿದ್ದಾರೆ. ಶಾಸಕ ಪ್ರಭು ಚವಾನ್ ಅವರೊಂದಿಗೆ ಬೀದರ್ ಮೂಲದ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿ ಸತೀಶ್ ನಾವಬಾಡೆ ಎಂಬುವವರು ಕೈಜೋಡಿಸಿದ್ದು, ರಾಮಮಂದಿರದ ಪವಿತ್ರ ನಿಧಿಯನ್ನು ಇವರೆಲ್ಲರೂ ಸೇರಿ ಲೂಟಿ ಹೊಡೆದಿದ್ದಾರೆ ಎಂಬ ಬಲವಾದ ಅನುಮಾನ ವ್ಯಕ್ತಪಡಿಸಿದ್ದಾರೆ.
ದೇಶ-ವಿದೇಶಗಳ ಶ್ರದ್ಧಾಳುಗಳು ಭಕ್ತಿಯಿಂದ ನೀಡಿದ ಶ್ರೀರಾಮನ ದೇಣಿಗೆಯ ಹಣವನ್ನು ಈ ಮೂವರು ವ್ಯಕ್ತಿಗಳು ಸೇರಿಕೊಂಡು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಮೂವರ ವಿರುದ್ಧ ಎ???ಟಿ ಅಧಿಕಾರಿಗಳು ಸಂಪೂರ್ಣ ತನಿಖೆ ನಡೆಸಿ, ಪವಿತ್ರ ಹಣ ಲೂಟಿ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಚಾಂದೋರಿಯ ದೀಪಕ್ ಪಾಟೀಲ್ ಅವರು ಉತ್ತರ ಪ್ರದೇಶದ ಉನ್ನತ ತನಿಖಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.



