ಜಿಲ್ಲಾಸುದ್ದಿ

ಕಲಬುರ್ಗಿ ಜಿಲ್ಲೆ ಬರಗಾಲ ಘೋಷಿಸಿ ಮೋಡ ಬಿತ್ತನೆಗೆ ಸಿದ್ಧರಾಮ್ ಧಣ್ಣೂರ್ ಆಗ್ರಹ

ಕಲಬುರ್ಗಿ, ಜು.೩- ಮುಂಗಾರು ಮಳೆ ಕೊರತೆಯಿಂದ ಬಿತ್ತನೆ ಕುಂಠಿತವಾಗಿದೆ. ಹೀಗಾಗಿ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ, ಕಣಕಿ ಗೋಶಾಲೆ ಆರಂಭಿಸುವoತೆ, ಉಜನಿ ಜಲಾಶಯದಿಂದ ಕರ್ನಾಟಕದ ನೀರಿನ ಪಾಲು ೧೫ ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಹಾಗೂ ಭೀಮಾ ನದಿ ನೀರು ತುಂಬಿಸಿ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಶುದ್ಧೀಕರಣ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಮೋಡ ಬಿತ್ತನೆ ಮಾಡಬೇಕು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಸಿದ್ಧರಾಮ್ ಧಣ್ಣೂರು ಅವರು ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಫಜಲಪುರ ತಾಲ್ಲೂಕಿನ ಜನರ ಜೀವನ ನಾಡಿ ಆಗಿರುವ ಭಿಮಾನದಿ ಸಂಪೂರ್ಣ ಮೇ ೧೫ ರಂದು ಬತ್ತಿ ಹೋಗಿದೆ. ತಕ್ಷಣ ಉಜನಿ ಜಲಾಶಯದಿಂದ ಕರ್ನಾಟಕಕ್ಕೆ ೧೫ ಟಿಎಂಸಿ ನೀರು ಕೊಡಬೇಕಾಗಿತ್ತು ಆದರೆ, ಈಗಲೂ ಕರ್ನಾಟಕಕ್ಕೆ ಒಂದು ಟಿಎಂಸಿ ಕೂಡ ನೀರು ಬಿಡುತ್ತಿಲ್ಲ. ಆದ್ದರಿಂದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣವೇ ಮಧ್ಯಪ್ರದೇಶ ಮಾಡಿ ಕರ್ನಾಟಕದ ಮುಖ್ಯಮಂತ್ರಿಗಳು ಮತ್ತು ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳು ಎರಡು ಸರ್ಕಾರಗಳು ಜಂಟಿಯಾಗಿ ಸಭೆ ನಡೆಸಿ ಕರ್ನಾಟಕ ರಾಜ್ಯದ ಭೀಕರ ಬರಗಾಲದ ಛಾಯೆ ಆವರಿಸಿದ ಪರಿಣಾಮವಾಗಿ ತಕ್ಷಣ ಉಜನಿ ಜಲಾಶಯದಿಂದ ೧೫ ಟಿಎಂಸಿ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ಭೀಮಾನದಿಯ ಮೇಲೆ ಮತ್ತು ಆಲಮಟ್ಟಿ ಜಲಾಶಯ ಹಾಗೂ ಮಹಾರಾಷ್ಟ್ರ ಪುಣೆ ಉಜನಿ ಡ್ಯಾಮ್‌ನಿಂದ ನೀರಿನ ಮೇಲೆ ಅವಲಂಬಿತರಾದ ಕಬ್ಬು ಬೆಳೆಗಾರರ ರೈತರು ಕಬ್ಬು ಒಣಗುತ್ತಿದೆ. ಭೀಕರ ಬರಗಾಲ ಎದುರಾಗಿದೆ. ರೇಣುಕಾ ಸಕ್ಕರೆ ಕಾರ್ಖಾನೆ ೯ ಲಕ್ಷ ಮೆಟ್ರಿಕ್ ಟನ್ ಕಬ್ಬು ಬೆಳೆಯುವ ರೈತರು, ಕೆಪಿಆರ್ ಸಕ್ಕರೆ ಕಾರ್ಖಾನೆ ೧೪ ಲಕ್ಷ ಮೆಟ್ರಿಕ್ ಟನ್ ಕಬ್ಬು ಬೆಳೆಯುವ ರೈತರು, ಉಗಾರ್ ಶುಗರ್ಸ್ ಸಕ್ಕರೆ ಕಾರ್ಖಾನೆ, ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬಾಲಾಜಿ ಶುಗರ್ಸ ಸಕ್ಕರೆ ಕಾರ್ಖಾನೆ ಮತ್ತು ಸಂಗಮನಾಥ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ ರೈತರು ಹಾಗೂ ಕೆಪಿಆರ್ ಆಲಮೇಲ್ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ ರೈತರು ಕಂಗಾಲಾಗಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ದೇವಲಗಾಣಗಾಪುರ ದೊಡ್ಡ ದೇವಸ್ಥಾನವಾಗಿರುವುದರಿಂದ ಮಹಾರಾಷ್ಟç ಮತ್ತು ಕರ್ನಾಟಕದಿಂದ ಅಪಾರ ಸಂಖ್ಯೆಯ ಭಕ್ತರು ಬಂದು ಹೋಗುತ್ತಾರೆ. ಅವರಿಗೆ ನೀರಿಲ್ಲದೇ ಗೊಜ್ಜು ನೀರಿನಲ್ಲಿ ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗುವ ಪರಿಸ್ಥಿತಿ ಬಂದಿದೆ. ಕಾರಣ ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಯ ನಾರಾಯಣಪುರ ಜಲಾಶಯದಿಂದ ಭೀಮಾ ನದಿಗೆ ಬರುವ ಸೊನ್ನ ಬ್ಯಾರೇಜ್‌ಗೆ ನೀರು ಹರಿಸಿ ದೇವಲ್ ಗಾಣಗಾಪುರದವರಿಗೆ ಹರಿಸಬೇಕು ಎಂದು ಅವರು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ ಎಲ್ ನಿನೋ ಪರಿಣಾಮ ಬರಗಾಲದ ಛಾಯೆ ಆವರಿಸಿದೆ. ಮುಂಗಾರು ಬಿತ್ತನೆಗೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಾಲ ಸೂಲ ಮಾಡಿ ಬೀಜ, ರಸಗೊಬ್ಬರ ಖರಿದಿಸಿದ್ದಾರೆ. ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಅಲ್ಪ ಸ್ವಲ್ಪ ಬಿತ್ತನೆ ಸಹ ಮಾಡಿದ್ದಾರೆ. ತೇವಾಂಶದ ಕೊರತೆಯಿಂದ ಬಿತ್ತಿದ್ದ ಮೊಳಕೆ ಒಡೆದು ಹೆಸರು, ಉದ್ದು, ತೊಗರಿ, ಸೋಯಾ ಬೆಳೆಗಳು ಬಿಸಲಿನ ತಾಪಮಾನಕ್ಕೆ ಒಣಗುತ್ತಿವೆ. ರೈತರ ರೊಕ್ಕದ ಮಾಲು ಹೆಸರು ಉದ್ದು ಸಂಪೂರ್ಣವಾಗಿ ಕೈ ಕೊಟ್ಟಂತಾಗಿದೆ, ರೈತರು ಚಿಂತಾಜನಕರಾಗಿದ್ದಾರೆ. ಮಳೆರಾಯ ಕೈ ಕೊಟ್ಟಿದೆ ಮುಂಗಾರು ಬಿತ್ತನೆ ಕುಂಠಿತವಾಗಿದೆ ಮುಂಗಾರು ಬೆಳೆಗಳು ರೈತರಿಗೆ ಲಾಗೋಡಿಗಾಗಿ ಆಸರೆಯಾಗುತಿತ್ತು ಪಾವು ದಾಣಿ ಮಾಲು ಇಲ್ಲ ರೈತರ ಬದುಕು ಅಧೋಗತಿಯಾಗಿದೆ ಮುಂದೆ ರೈತ ಕುಟುಂಬದ ಬದುಕು ನಡೆಸೋದು ಹೇಗೆ ಮತ್ತು ದನಕರುಗಳಿಗೆ ಕಣಿಕಿ ಚಿಂತೆ ಬಹಳ ಗಂಭೀರವಾಗಿದೆ. ಇದ್ದ ಬೋರವೆಲ್ಲುಗಳು ಸಹ ಬತ್ತುತ್ತಿವೆ. ನೀರಿನ ಪ್ರಮಾಣ ಸಹ ನೆಲ ಕಚ್ಚುತ್ತಿದೆ. ತೊಗರಿ ನಾಡು ಬರುಡಾಗಿದೆ, ಮಳೆ ಇಲ್ಲದೆ ಕಬ್ಬು ಒಣಗುತ್ತಿದೆ. ಆದ್ದರಿಂದ ಭೀಮಾ ನದಿಗೆ ಮಹಾರಾಷ್ಟçದಿಂದ ನಮ್ಮ ಪಾಲಿನ ೧೫ ಟಿಎಂಸಿ ನೀರು ಹರಿಸಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಅಶೋಕ ಹೂಗಾರ್, ಶರಣಗೌಡ ಪಾಟೀಲ್, ವಿಶ್ವನಾಥ ಹೂಗಾರ್, ದಿಲೀಪ್ ನಾಗೂರೆ, ಸಂತೋಷ್ ಜಿ. ಮಲಗೊಂಡ ಅವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button