ಜಿಲ್ಲಾಸುದ್ದಿ

ಎಸ್‌ಐಆರ್ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ


ಬೀದರ್, ಜೂ.೩೦- ಎಸ್‌ಐಆರ್ ರದ್ದತಿಗಾಗಿ ಹಾಗೂ ಮಾರ್ಪಾಡಿಗಾಗಿ ಕಪ್ಪು ಬಟ್ಟೆ ಕಟ್ಟಿಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಎಸ್‌ಐಆರ್ ವಿರೋಧಿ ಜನಾಂದೋಲನ ಸಮಿತಿ ಮತ್ತು ಇತರ ಜಾತ್ಯಾತೀತ ಪಕ್ಷಗಳ, ಜನಪರ ಸಂಘಟನೆಗಳ ಕಾರ್ಯಕರ್ತರು ಸಾಂಕೇತಿಕ ಪ್ರತಿಭಟನೆ ಮಾಡಿದರು.


ಸಂಚಾಲಕ ಶ್ರೀಕಾಂತಸ್ವಾಮಿ ಅವರು ಮಾತನಾಡಿ, ಎಸ್‌ಐಆರ್ ಜನ ವಿರೋಧಿ ಪ್ರಜಾಪ್ರಭುತ್ವ ವಿರೋಧಿ ಆಗಿದೆ, ಬಡವರ ದಿನ ದಲಿತರ ಹಿಂದುಳಿದವರ ಮತ್ತು ಮಹಿಳೆಯರ ಮತಗಳು ತಿರಸ್ಕಾರ ಆಗಿ ವಂಚಿತರಾಗುತ್ತಿದ್ದಾರೆ. ಚುನಾವಣಾ ಆಯೋಗ ಹೊರಡಿಸಿದ್ದ ಹನ್ನೊಂದು ಪುರಾವೆಗಳು ಹೊರತು ಪಡಿಸಿ ಬೇರೆ ಪುರಾವೆಗಳು ಪರಿಗಣಿಸುತ್ತಿಲ್ಲ. ಗ್ರಾಮೀಣ ಭಾಗದ ಮತ್ತು ನಗರ ಪಟ್ಟಣ ಪ್ರದೇಶಗಳ ಬಡವರಲ್ಲಿ ಅವಿದ್ಯಾವಂತರಲ್ಲಿ ವಿಶೇಷವಾಗಿ ಮಹಿಳೆಯರಲ್ಲಿ ಆಯೋಗ ಸೂಚಿಸಿದ್ದ ಪುರಾವೆಗಳು ಬಹುತೇಕ ಜನರಲ್ಲಿ ಇರುವದಿಲ್ಲ ಎಂದರು.


ಬಡ ಜನರಲ್ಲಿ ಸಾಮಾನ್ಯವಾಗಿ ದೊರಕುವ ರೇಷನ್ ಕಾರ್ಡ್, ಆಧಾರ ಕಾರ್ಡ್, ವಾಹನ ಚಾಲನಾ ಪ್ರಮಾಣ ಪತ್ರ, ಮತ ಪತ್ರಗಳ ಪುರಾವೆ ಯೋಗ್ಯ ಇಲ್ಲ ಎಂದು ಆಯೋಗ ಹೇಳುತ್ತದೆ. ಇದರಿಂದ ವಿಶೇಷವಾಗಿ ಬಡ ಜನರ ಮತಗಳು ತಿರಸ್ಕಾರ ಆಗುತ್ತವೆ ಎಂದು ಹೇಳಿದರು. ಇದು ಕೇಂದ್ರ ಸರ್ಕಾರ ಹುನ್ನಾರ ಆಗಿದೆ, ಕೇಂದ್ರ ಸರ್ಕಾರ ೨೦೧೪ರಿಂದ ಜನವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ. ನೋಟಬಂದ, ರೈತರ ಕಾನೂನು, ಅನಿಯಮಿತ ಜಿಎಸ್‌ಟಿ, ನೀಟ್ ಪರೀಕ್ಷೆ, ಎನ್‌ಆರ್‌ಸಿ, ಈಗ ಎಸ್‌ಐಆರ್. ಆದರಿಂದ ನಾವು ಎಸ್‌ಐಆರ್ ರದ್ದು ಮಾಡಬೇಕೆಂದು ಆಗ್ರಹಿಸುತ್ತೇವೆ ಎಂದು ಅವರು ಹೇಳಿದರು.


ಓಂಪ್ರಕಾಶ್ ರೊಟ್ಟಿ ಅವರು ಮಾತನಾಡಿ, ಕೇಂದ್ರ ಸರ್ಕಾರ ಬೇಕಂತಲೇ ಚುನಾವಣಾ ಆಯೋಗದ ಮುಖ್ಯ ಚುನಾವಣ ಆಯುಕ್ತರು ನೇಮಕ ಪ್ರಕ್ರಿಯಾ ಬದಲಾಯಿಸಿದ್ದಾರೆ. ಆಯ್ಕೆ ಸಮಿತಿಯಲ್ಲಿ ಮೂವರು ಸದಸ್ಯರಲ್ಲಿ ಮುಖ್ಯ ನ್ಯಾಯಾಧೀಶರನ್ನು ತೆಗೆದು ಹಾಕಿ ತಮ್ಮದೇ ಸಂಪುಟ ಸದಸ್ಯರನ್ನು ಆಯ್ಕೆ ಸಮಿತಿಯಲ್ಲಿ ಸೇರಿಸಿ ಏಕಾಸೌಮ್ಯ ಸಾಧಿಸಿದ್ದಾರೆ. ಕಾನೂನು ಬದಲಾವಣೆ ಮಾಡುತ್ತಾ ಮುಖ್ಯ ಚುನಾವಣ ಆಯುಕ್ತರ ಕಾರ್ಯಕ್ಷಮತೆ ಬಗ್ಗೆ ಯಾರು ಪ್ರಶ್ನಿಸಬಾರದು ದೂರು ಸಲ್ಲಿಸಬಾರದು, ಮತ್ತು ನ್ಯಾಯಾಲಯ ಕೂಡ ಮಧ್ಯ ಪ್ರವೇಶಿಸಬಾರದು ಎಂದು ಕಾನೂನು ಮಾಡಿದ್ದು, ಆಯುಕ್ತರನ್ನು ಸರ್ವಾಧಿಕಾರಿ ಮಾಡಿದ್ದಾರೆ ಎಂದು ಆರೋಪಿಸಿದರು.


ಅಬ್ದುಲ್ ಮನ್ನಾನ್ ಸೇಠ್ ಅವರು ಮಾತನಾಡಿ, ಎಸ್‌ಐಆರ್ ಜನವಿರೋಧಿ ಆಗಿದೆ, ಇದರಿಂದ ಬಹುತೇಕ ಬಡವರು ವೋಟ್ ವಂಚಿತರಾಗುತ್ತಾರೆ. ಆದರಿಂದ ಮುಂದೆ ಸಿಗುವ ಸರಕಾರಿ ಸೌಲಭ್ಯಗಳಾದ ರೇಷನ್, ಮಾಶಾಸನ, ಮನೆ ವಂಚಿತರಾಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು. ಮನವಿಯನ್ನು ರಾಜ್ಯ ಚುನಾವಣಾ ಆಯುಕ್ತರಿಗೆ ಜಿಲ್ಲಾಧಿಕಾರಿ ಮುಖಾಂತರ, ಅಪರ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿದರು.


ಪ್ರತಿಭಟನೆಯಲ್ಲಿ ಅಬ್ದುಲ್ ಮನ್ನಾನ ಸೇಠ್, ನಿಜಾಮುದ್ದೀನ್, ಜಗದೀಶ್ವರ ಬಿರಾದಾರ್, ಮಹೇಶ್ ಗೋರನಾಳಕರ್, ಸಿದ್ದು ಫುಲಾರಿ, ಮಚ್ಚೆಂದರ ವಾಘಮಾರೆ, ಪ್ರಭು ಮುಧೋಳ, ರಾಜಕುಮಾರ್ ಪಾಟೀಲ್ ಬಾವಗಿ, ಸಂದೀಪ ಮುಕುಂದೆ, ಸುಧಾಮ ಹುಲಸೂರೆ, ಸಂತೋಷ ಜೋಳದಾಬಕೆ, ಯೊಹಾನ್, ಶಿವಕುಮಾರ್ ಶಿವಗೊಂಡ, ವೆಂಕಟೇಶ್ ಮುಂತಾದವರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button